ವಿಶ್ವಾದ್ಯಂತ ಈಗ ಸ್ನೇಹಿತರ ಕೊರತೆ ಉಂಟಾಗಿದೆ. 1960 ರ ಸುಮಾರಿಗೆ ಒಬ್ಬೊಬ್ಬರಿಗೆ 100 ಸ್ನೇಹಿತರಿದ್ದರಂತೆ. 1990 ರ ಹೊತ್ತಿಗೆ ಆ ಸಂಖ್ಯೆ 50 ಕ್ಕೆ ಇಳಿಯಿತು. 2020 ರ ವೇಳೆಗೆ ಕೇವಲ 10 ಸ್ನೇಹಿತರು ಮಾತ್ರ ಉಳಿದಿದ್ದಾರೆ. ಈಗ ಒಬ್ಬರೇ ಇರುವುದು ಕೂಡ ಕಷ್ಟಕರವಾಗಿದೆ. ದೇಶದ 12% ಜನಸಂಖ್ಯೆಗೆ ಸ್ನೇಹಿತರೇ ಇಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಸ್ನೇಹಿತರೊಂದಿಗೆ ಮುಖಾಮುಖಿ ಕಳೆಯುವ ಸಮಯ ಈ ಹಿಂದೆ 1 ಗಂಟೆ ಇದ್ದರೆ, ಪ್ರಸ್ತುತ ಅದು 35 ನಿಮಿಷಗಳಿಗೆ ಇಳಿದಿದೆ. ಒಳ್ಳೆಯ ಸ್ನೇಹಿತರು ಲೈಫ್ ಇನ್ಶೂರೆನ್ಸ್ (ಜೀವ ವಿಮೆ) ಇದ್ದಂತೆ. ಸ್ನೇಹಿತರಿಲ್ಲದವರು ದಿನಕ್ಕೆ 20 ಸಿಗರೇಟ್ ಸೇದಿದಷ್ಟು ಒತ್ತಡವನ್ನು (Stress) ಅನುಭವಿಸುತ್ತಾರಂತೆ. ಒಳ್ಳೆಯ ಸ್ನೇಹಿತರನ್ನು ಹೊಂದಿರುವವರಲ್ಲಿ ರಕ್ತದೊತ್ತಡ (Blood Pressure) ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ. ಸ್ನೇಹಿತರ ಜೊತೆಗಿರುವವರು ಉತ್ಸಾಹದಿಂದ ಇರುತ್ತಾರೆ, ವ್ಯಾಯಾಮ, ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅವರ ಒಡನಾಟದಲ್ಲಿ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಸ್ನೇಹ ಸುಮ್ಮನೆ ಬೆಳೆಯುವುದಿಲ್ಲ. ಸ್ನೇಹಕ್ಕೆ ಸಮಯವೇ ದೊಡ್ಡ ಹೂಡಿಕೆ. ಕನಿಷ್ಠ ಪರಿಚಯವಾಗಲು 40 ಗಂಟೆಗಳ ಕಾಲ ಒಟ್ಟಿಗೆ ಕಳೆಯಬೇಕು, ಸಾಧಾರಣ ಸ್ನೇಹಕ್ಕೆ ಇನ್ನು 90 ಗಂಟೆಗಳು ಮತ್ತು ಗಟ್ಟಿಯಾದ ಸ್ನೇಹಕ್ಕೆ ಇನ್ನೊಂದು 40 ಗಂಟೆಗಳ ಸಮಯ ಬೇಕಾಗುತ್ತದೆಯಂತೆ. ನಮ್ಮ ಬಳಿ ಈಗ ಅಷ್ಟು ಸಮಯವಿದೆಯೇ?
ಒಮ್ಮೆ ಒಳ್ಳೆಯ ಸ್ನೇಹ ಬೆಳೆದ ಮೇಲೆ ಅದನ್ನು ಉಳಿಸಿಕೊಳ್ಳಲು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ನಮ್ಮ ಕೆಲಸದ ಸ್ಥಳದಲ್ಲಿ ನಾವು ಸ್ನೇಹ ಎಂದು ಭಾವಿಸುವುದು ಕೇವಲ ಮೇಲ್ಪದರದ ಮಾತುಗಳಷ್ಟೇ. ಫೇಸ್‌ಬುಕ್ ಮತ್ತು ವಾಟ್ಸಾಪ್ ಸ್ನೇಹಗಳು ಕ್ಷಣಿಕವಷ್ಟೇ. ಒಟ್ಟಾರೆಯಾಗಿ ಸ್ನೇಹ ಸಂಬಂಧಗಳು ಕಡಿಮೆಯಾಗುತ್ತಿವೆ. ಇದಕ್ಕೆ ಅನೇಕ ಕಾರಣಗಳಿದ್ದರೂ, “ಸಮಯವಿಲ್ಲ ಮಿತ್ರಾ!” ಎಂಬುದೇ ಅತಿ ದೊಡ್ಡ ಕಾರಣ. ಸಮಯ ಮೀಸಲಿಡಿ. ಒಳ್ಳೆಯ ಸ್ನೇಹವನ್ನು ಬೆಳೆಸಿಕೊಳ್ಳಿ. ಕನಿಷ್ಠ ಪಕ್ಷ ಇರುವ ಸ್ನೇಹಿತರನ್ನಾದರೂ ಉಳಿಸಿಕೊಳ್ಳಿ.
ಒಂದು ಮಗು ಹುಟ್ಟಿ ಬೆಳೆದು ಶಾಲೆಗೆ ಹೋಗಲು ಆರಂಭಿಸಿದಾಗ ಸಿಗುವ ಪಾಠಕ್ಕಿಂತ ಅಮೂಲ್ಯ ಬಂಧನವೇ ಗೆಳೆತನ ಅದು ನಿಜವೇ ಆಗಿದ್ದರು ಯಾರಿಂದಲೂ ಅದನ್ನು ಮರೆಯಲು ಸಾಧ್ಯವಿಲ್ಲ ಹಾಗೆಂದು ಗೆಳೆತನ ಯಾವಾಗ ಹೀಗೆ ಆರಂಭವಾಗುತ್ತದೆ ಎಂದು ಯಾರಿಗೂ ತಿಳಿಯದು ಆದರೆ ಅದಕ್ಕೆ ಇರುವ ಶಕ್ತಿಯ ಅಪೂರ್ವ ಅನೇಕ ಬಾರಿ ನಾವು ಸಂಕಷ್ಟದಲ್ಲಿ ಸಿಲುಕಿಕೊಂಡಾಗ ತಂದೆ ತಾಯಿಗಿಂತ ಮೊದಲು ಗೆಳೆಯನ ಬಳಿ ಮುಜುಗರವಿಲ್ಲದೆ ಹೇಳಿಕೊಳ್ಳುತ್ತವೆ ಹಿರಿಯರು ಅಷ್ಟೇ ತಮ್ಮ ಮಕ್ಕಳ ಜೊತೆ ಒಳ್ಳೆಯ ಗೆಳೆಯರಿದ್ದಾರೆ ಎಂದಾದರೆ ನೆಮ್ಮದಿಯ ನೆಟ್ಟುಸಿರು ಬಿಡುತ್ತಾರೆ. ನಿಜವಾದ ಗೆಳೆಯರೆಂದರೆ ಹಣ, ಸಂಪತ್ತು, ಆಸ್ತಿ ಇದ್ದಾಗ ಅಥವಾ ನಾವು ಸಂತೋಷದಲ್ಲಿದ್ದಾಗ ಮಾತ್ರ ಬರುವವರಲ್ಲ ಬದಲಿಗೆ ದುಃಖದಲ್ಲಿರುವಾಗ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತನ್ನ ಕೈಲಾದಷ್ಟು ನೆರವಾಗುವವನೇ ನಿಜವಾದ ಗೆಳೆಯ. ಇಂತಹ ಒಬ್ಬ ಗೆಳೆಯ ನಮಗೆ ಸಿಕ್ಕರೆ ನಾವು ಪುಣ್ಯವಂತರು ಎಂದೇ ಹೇಳಬಹುದು ಗಮನಿಸಿ ನೋಡಿ ನೀವು ಸಂತೋಷದಿಂದ ಇದ್ದೀರಿ ಎಂದಾದರೆ ಹೆಚ್ಚಿನ ಬಾರಿ ಅದಕ್ಕೆ ನಿಮ್ಮ ಗೆಳೆಯರೇ ಕಾರಣರಾಗಿರುತ್ತಾರೆ. ಅನೇಕ ಗೆಳೆಯರು ಕಷ್ಟ ಸಮಯದಲ್ಲಿ ಒಂಟಿಯಾಗಿ ಬಿಟ್ಟು ಹೋದವರಲ್ಲ ಒಳ್ಳೆಯ ಕೆಲಸ ಮಾಡಲು ಹೊರಟಾಗ ಅಪಹಸ್ಯ ಮಾಡಿದವರಲ್ಲ, ಪ್ರೋತ್ಸಾಹಿಸಿದವರೆ ಎಲ್ಲಾ. ನಮ್ಮ ಸಂತೋಷದಲ್ಲಿ ಬಹು ದೊಡ್ಡ ಪಾತ್ರ ವಹಿಸಿರುವವರು ಗೆಳೆಯರು ಅನೇಕ ಪಾಠಗಳನ್ನು ಹೇಳಿಕೊಟ್ಟಿದ್ದಾರೆ ಹೊಸ ವಿಚಾರಗಳನ್ನು ಕಲಿಸಿದ್ದಾರೆ ಎಷ್ಟೋ ಮಂದಿ ಪ್ರೀತಿಯಲ್ಲಿ ಸೋತು ಜೀವನವೆ ಮುಗಿಯಿತು ಎಂದು ಕೂತವರಿಗೆ ಬೈದು ಬುದ್ದಿ ಹೇಳಿರುವ ಸ್ನೇಹಿತರನ್ನು ನೋಡಿದ್ದೇವೆ ಇನ್ನು ತನಗೇನಾದರೂ ಆಗಲಿ ಚಿಂತೆ ಇಲ್ಲ ನನ್ನ ಸ್ನೇಹಿತನಿಗೆ ಏನು ತೊಂದರೆ ಆಗಬಾರದು ಎಂದು ತೆರೆಮರೆಯಲ್ಲಿ ಅರ್ಥ ಮಾಡಿಕೊಂಡು ಸಹಾಯ ಮಾಡಿದ ಸ್ನೇಹಿತರನ್ನು ಕಷ್ಟಪಟ್ಟವರನ್ನು ಕಂಡಿದ್ದೇವೆ ನೋಡಿದ್ದೇವೆ. ಸ್ನೇಹ ಎನ್ನುವುದು ಬಡವ ಬಲ್ಲಿದ ಜಾತಿ ಧರ್ಮ ವಯಸ್ಸಿನ ಅಂಗಿಲ್ಲದೆ ಬೆಳೆಯುತ್ತದೆ ಪ್ರತಿ ವ್ಯಕ್ತಿಯು ತನಗೆ ಧೈರ್ಯ ತುಂಬವ ಕಷ್ಟ ಸುಖಗಳನ್ನು ಹಂಚಿಕೊಳ್ಳಬಲ್ಲ ಕೆಟ್ಟ ಪರಿಸ್ಥಿತಿಯಲ್ಲೂ ನೈತಿಕತೆ ತುಂಬುವ ಸ್ನೇಹಿತರ ಬಳಗವನ್ನು ಸೃಷ್ಟಿಕೊಳ್ಳುವುದು ಸೂಕ್ತ.. ಗೆಳೆತನ ನಿಜವಾಗಿದ್ದರೆ ಎಂದಿಗೂ ಅದನ್ನು ಕಳೆದುಕೊಳ್ಳಬೇಡಿ.